Index   ವಚನ - 59    Search  
 
ಲಿಂಗಭೋಗೋಪಭೋಗಿ ಎಂದು ತಾ ಮುನ್ನ ಬಿಟ್ಟುದ ಮುಟ್ಟಬಹುದೆ? ತನ್ನ ಸುಖಕ್ಕೆ ತಾ ಭೋಗಿಸಿ ಲಿಂಗ ಮುಂತಾಗಿ ಕೂಡಿದೆನೆನಬಹುದೆ? ಲಿಂಗದಂಗವನರಿದು ತಾ ಕೂಡಬಲ್ಲಡೆ ತನ್ನ ಇಂದ್ರಿಯಗಳ ಇಚ್ಫೆ ಉಂಟೆ? ತಾ ಕದ್ದ ಕಳವ ಪರಿಹರಿಸಿಕೊಳಲರಿಯದೆ, ಇದಿರ 'ನೀವು ಬನ್ನಿ' ಎಂದು ಕರೆವ ಕದ್ದೆಹಕಾರನಂತೆ. ಈ ದ್ವಯ ಇದಿರಿಡಬಾರದ ಕುರುಹು. ಲಿಂಗಭೋಗೋಪಭೋಗಿ ತಾನಾದಡೆ ಉರಿಗೂಡಿಯೆ ಕರಗುವ ಕರ್ಪೂರದ ಇರವಿನಂತೆ ಇರಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನ ಸಂಗಗೂಡಿ ಸುಖಿಸುವ ಲಿಂಗಾಂಗಿಯ ಇರವು.