ಶಿವಪೂಜಾಲಂಬನ ಕರ್ಮ ಕ್ರೀ,
ದಾಸಿ ಕೊಡನ ಹೊತ್ತಂತೆ;
ಶೇಷನ ಚಮತ್ಕಾರ ಭೇದದಂತೆ
ತತ್ಕಾಲದಲ್ಲಿ ಬಂದ ಗುರುವಿನಿಂದ
ಜಂಗಮವ ಲಿಂಗದಲ್ಲಿ ವಿಶ್ರಮಿಸಿ,
ಮನದಲ್ಲಿ ಮುಯ್ಯಾಂತು, ಕಂಗಳ ದೃಷ್ಟಿಯಿಂದ ವಂದಿಸಿ,
ಲಿಂಗಾನುಭಾವಿಗಳ ಅವರಂಗವಳಿದು ಮೂರ್ತಿಗೊಳಿಸಿ,
ಶರಣತತಿಗಳಿಂದ ಕರಣಂಗಳ ನಿವಾರಿಸಿ
ಇಂತಪ್ಪ ಕ್ರಿಯಾಪೂಜೆ ಬಾಹ್ಯದ ಶ್ರದ್ಧೆ,
ಜ್ಞಾನದ ಬೆಳಗು, ಸ್ವಾನುಭಾವ ಸನ್ನದ್ಧ.
ಇಂತೀ ಕ್ರಿಯಾ ಸಾತ್ವಿಕ ನಿರ್ಧಾರವಾದಲ್ಲಿ,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನನರಸಿ
ತೊಳಲಿ ಬಳಲಲಿಲ್ಲ.
Art
Manuscript
Music
Courtesy:
Transliteration
Śivapūjālambana karma krī,
dāsi koḍana hottante;
śēṣana camatkāra bhēdadante
tatkāladalli banda guruvininda
jaṅgamava liṅgadalli viśramisi,
manadalli muyyāntu, kaṅgaḷa dr̥ṣṭiyinda vandisi,
liṅgānubhāvigaḷa avaraṅgavaḷidu mūrtigoḷisi,
śaraṇatatigaḷinda karaṇaṅgaḷa nivārisi
intappa kriyāpūje bāhyada śrad'dhe,
jñānada beḷagu, svānubhāva sannad'dha.
Intī kriyā sātvika nirdhāravādalli,
ennayyapriya im'maḍi niḥkaḷaṅka mallikārjunananarasi
toḷali baḷalalilla.