Index   ವಚನ - 3    Search  
 
ನಾನು ನಾನಾದ ಕಾರಣ ಎನಗೆ ಗುರುವಿಲ್ಲ. ನಾನೆಂಬುದರಿಯೆನಾಗಿ ಎನಗಾ ಲಿಂಗವಿಲ್ಲ. ನಾ ಮಾಡದವನಾಗಿ ಎನಗಾ ಜಂಗಮವಿಲ್ಲ. ಇದನಿನ್ನಾರ ಕೇಳುವೆ, ರಕ್ಕಸನೊಡೆಯ ಕೊಟ್ಟುದ ಬೇಡ.