Index   ವಚನ - 7    Search  
 
ಭಕ್ತರೆಲ್ಲರೂ ಅಸತ್ಯವ ಮಾಡುವಾಗ ನಾನೆ ಭಕ್ತನಾಗಿದ್ದೆ. ಇವರೆಲ್ಲರು ಗುರುಲಿಂಗಜಂಗಮಕ್ಕೆ ಮಾಡುವಾಗ, ನಾನೆನ್ನ ಸತಿ ಸುತ ಬಂಧುಗಳಿಗೆ ಮಾಡಿ ಮಾಡಿ ದಣಿದು ನಿರಂಗನಾದೆ. ಇಂತಿವರ ನಡುವೆ ನಾ ಕಡುಗಲಿ. ರಕ್ಕಸನೊಡೆಯ ಕೊಟ್ಟುದ ಬೇಡ.