Index   ವಚನ - 1    Search  
 
ಬಸವ ಜಗದಾದಿ ಬೀಜ, ಬಸವ ಆನತ ಸುರಭೂತ ಬಸವ ಬಸವಾ ಎಂಬ ನಾಮಸಾಲದೆ? ಬಸವ ಭವರೋಗ ವೈದ್ಯ, ಬಸವ ವೇದಾಂತ ವೇದ್ಯ. ಬಸವ ಬಸವಾ ಎಂಬ ಲೀಲೆ ಸಾಲದೆ? ಬಸವ ಕರುಣಾಮೃತ ಸಿಂಧು, ಬಸವ ಪರಮಬಂಧು, ಬಸವ ವರದ ಸೋಮನಾಥ ನೀನೆ, ಬಸವ ಬಸವಾ ಬಸವಾ ಶರಣೆಂದರೆ ಸಾಲದೆ?