Index   ವಚನ - 1    Search  
 
ತನುವಿನಲ್ಲಿ ವೇಷವನಾರು ಧರಿಸರು? ಪಟದಲ್ಲಿರದೆ ವೇಷ? ಘಟದಲ್ಲಿರದೆ ವೇಷ? ಕೊಂಬಿನಲ್ಲಿರದೆ ವೇಷ? ಅಂಬರದಲ್ಲಿರದೆ ವೇಷ? ವೇಶಿಯಲ್ಲಿರದೆ ವೇಷ? ಮೇಘದಲ್ಲಿರದೆ ವೇಷ? ಇವು ರಾಶಿಯ ದೈವವಲ್ಲದೆ, ಪರಮನ ವೇಷ ಕಾವಿಯಲಿಲ್ಲ, ಜಡೆ ಮುಡಿ ಬೋಳಿನಲಿಲ್ಲ, ವಿಶ್ವಪತಿ ವಿಶ್ವನಾಥಾ.