Index   ವಚನ - 6    Search  
 
ಜಂಗಮವೆಂತವನೆಂದಡೆ: ನಿಜಸ್ವರೂಪವಾದಾತನೀಗ ಜಂಗಮ. ಅಧೀನವುಳ್ಳಾತನು ಅಲ್ಲ, ಅಧೀನವಿಲ್ಲದಾತನು ಅಲ್ಲ. ಸಾಕಾರನು ಅಲ್ಲ, ನಿರಾಕಾರನು ಅಲ್ಲ. ಶಾಂತನು ಅಲ್ಲ, ಕ್ರೋಧಿಯು ಅಲ್ಲ. ಕಾಮಿಯು ಅಲ್ಲ, ನಿಷ್ಕಾಮಿಯು ಅಲ್ಲ. ಖಂಡಿತನು ಅಲ್ಲ, ಅಖಂಡಿತನು ಅಲ್ಲ. ದ್ವೈತಾದ್ವೈತವನಳಿದು ದ್ವಂದ್ವಾತೀತನಾಗಿ ನಿಜಗುರು ಶಾಂತಮಲ್ಲಿಕಾರ್ಜುನ ತಾನಾದ ಜಂಗಮ.