ಕೂಪ ಚಿಲುಮೆ ಬಹುಜಲಂಗಳಲ್ಲಿ
ಸ್ವೀಕರಿಸಿಕೊಂಬುದು ಅದೇತರ ಶೀಲ?
ತನು ಕರಗದೆ, ಮನ ಮುಟ್ಟದೆ,
ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ,
ಸುಖದುಃಖವೆಂಬ ಉಭಯವರಿಗಾಣದೆ,
ಅಂದಂದಿಗೆ ಆಯು ಸಂದಿತ್ತೆಂದಿರಬೇಕು.
ಆ ಗುಣ ಶಿವಲಿಂಗ ಖಂಡಿತ ನೇಮ,
ಈ ಸಂಗವೆ ಎನಗೆ ಸುಖ;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.
Art
Manuscript
Music
Courtesy:
Transliteration
Kūpa cilume bahujalaṅgaḷalli
svīkarisikombudu adētara śīla?
Tanu karagade, mana muṭṭade,
āgige muyyāntu cēgige halubutta,
sukhaduḥkhavemba ubhayavarigāṇade,
andandige āyu sandittendirabēku.
Ā guṇa śivaliṅga khaṇḍita nēma,
ī saṅgave enage sukha;
ācārave prāṇavāda rāmēśvaraliṅgada kūṭa.