Index   ವಚನ - 43    Search  
 
ಖಂಡಿತ ವ್ರತ ಅಖಂಡಿತ ವ್ರತ, ಸಂದ ವ್ರತ, ಸಲ್ಲದ ವ್ರತವೆಂದು ನೇಮವ ಮಾಡಿಕೊಂಡು ಊರೂರ ತಪ್ಪದೆ ಸಾರಿ ದೂರಿಕೊಂಡು ತಿರುಗಲೇತಕ್ಕೆ? ತಾ ಮಾಡಿಕೊಂಡ ವ್ರತ ನೇಮ ಊರೆಲ್ಲಕ್ಕೊ ತನಗೊ ಎಂಬುದ ತಾನರಿಯದೆ ನಿಕ್ಷೇಪವ ಕಂಡೆನೆಂದು ಸಾರಿದರುಂಟೆ ಆ ಮನ ಜ್ಞಾನವ್ರತ ಕಳ್ಳನ ಚೇಳೂರಿದಂತೆ ಅಲ್ಲಿಯೆ ಅಡಗಬೇಕು. ಹೀಗಲ್ಲದೆ ಕಲಕೇತರಂತೆ ಊರಮಗನೆಂದು ಬಾಗಿಲಲ್ಲಿ ಇರಿದುಕೊಂಬನಂತೆ ಅವ ಮಾಡಿಕೊಂಡ ವ್ರತ ಅದಾರಿಗೆ ಯೋಗ್ಯ! ಅದು ಸಾಗದ ನೇಮ, ಶೀಲವಾಗದ ಅಕೃತ್ಯ. ಇಂತೀ ವ್ರತದ ಭೇದವನರಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ.