ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ,
ತನ್ನಾಚಾರಕ್ಕೆ ಹೊರಗಾದವರ ಅಣ್ಣತಮ್ಮನೆಂದು,
ತಾಯಿತಂದೆ ಎಂದು, ಹೊನ್ನು ಮಣ್ಣು ಹೆಣ್ಣಿನವರೆಂದು,
ಅಂಗೀಕರಿಸಿದಡೆ, ಅವರಂಗಣವ ಕೂಡಿದಡೆ,
ಅವರೊಂದಾಗಿ ನುಡಿದಡೆ,
ಭಕ್ತರು ಸತ್ಯರಿಗೆ ಮುನ್ನವೆ ಹೊರಗು.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು
ಅವರನೊಳಗಿಟ್ಟುಕೊಳ್ಳ.
Art
Manuscript
Music
Courtesy:
Transliteration
Tannācārakke bandavaru tannavarendu bhāvisabēkallade,
tannācārakke horagādavara aṇṇatam'manendu,
tāyitande endu, honnu maṇṇu heṇṇinavarendu,
aṅgīkarisidaḍe, avaraṅgaṇava kūḍidaḍe,
avarondāgi nuḍidaḍe,
bhaktaru satyarige munnave horagu.
Ācārave prāṇavāda rāmēśvaraliṅgavu
avaranoḷagiṭṭukoḷḷa.