Index   ವಚನ - 64    Search  
 
ತಾ ಮುಳುಗಿದ ಮತ್ತೆ ಸಮುದ್ರದ ಪ್ರಮಾಣ ತನಗೇನು? ತಾನೊಂದು ಶಸ್ತ್ರದಲ್ಲಿ ಸಲೆ ಸಂದ ಮತ್ತೆ ತನ್ನಂಗವ ಹಲವು ಶಸ್ತ್ರ ಬಂಧಿಸಿದಡೇನು? ತಾ ನಿಂದ ನಿರಿಗೆಯಲ್ಲಿ ಸಂದ ಮತ್ತೆ ಸಂದಣಿಗಾರರ ಬಂಧದ ಮಾತೇತಕ್ಕೆ? ಇದು ವ್ರತಾಚಾರದ ನಿಂದ ನಿರಿಗೆ, ಸಲೆ ಸಂದ ನೇಮ. ಕಟ್ಟಾಚಾರಿಯ ದೃಷ್ಟನಿಷ್ಠೆ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದೊಳಗೆ ಕಟ್ಟಿದ ತೊಡರು.