Index   ವಚನ - 71    Search  
 
ದೇವರಿಗೆಂದು ಬಂದ ದ್ರವ್ಯ ಮತ್ತೆ ಸಂದೇಹವಾಯಿತ್ತೆಂದು ಹಾಕೆಂದಾಗವೆ ಘನಲಿಂಗಕ್ಕೆ ದೂರ. ಬೇಹುದಕ್ಕೆ ಮೊದಲೆ ಸಂದೇಹವನಳಿದು ತರಬೇಕಲ್ಲದೆ ಉಂಡು ಊಟವ ಹಳಿಯಲುಂಟೆ? ತಂದುಕೊಟ್ಟು ಕುಲವನರಸಲುಂಟೆ? ಇಂತಿವರು ತಮ್ಮಂಗ ವ್ರತವನರಿಯದೆ ಇದಿರ ವ್ರತದಂಗ ತಪ್ಪಿತೆಂದು ಕೊಂಡಾಡುವರ ಕಂಡು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರು ಕಂಡಹರೆಂದು ಅಂಜುತ್ತಿದ್ದನು.