ನಚ್ಚುಮಚ್ಚಿನ ವ್ರತ, ನಿಷ್ಠೆಹೀನನ ಪೂಜೆ,
ಭಕ್ತಿ ಇಲ್ಲದವನ ಮಾಟಕೂಟ ಇಂತಿವು ಸತ್ಯವಲ್ಲ.
ಆ ವ್ರತ ನೇಮ ನಿತ್ಯಂಗಳಲ್ಲಿ
ಮನ ವಚನ ಕಾಯ ತ್ರಿಕರಣ ಶುದ್ಧವಾಗಿ,
ಬಾಹ್ಯಕ್ರೀಯಲ್ಲಿ ಅರಿವ ಆತ್ಮನಲ್ಲಿ,
ಮಿಕ್ಕಾದ ಪದಾರ್ಥಂಗಳಲ್ಲಿ ಸದ್ಭಾವ ತಾನಾಗಿ,
ಅರಿವಿಂಗೂ ಆಚಾರಕ್ಕೂ ಎಡೆದೆರಪಿಲ್ಲದೆ
ಕ್ರೀಯೆ ವಸ್ತುವಾಗಿ, ವಸ್ತುವೆ ಕ್ರೀಯಾಗಿ,
ಬಣ್ಣ ಬಂಗಾರದಂತೆ ನಿಂದಂಗವೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.
Art
Manuscript
Music
Courtesy:
Transliteration
Naccumaccina vrata, niṣṭhehīnana pūje,
bhakti illadavana māṭakūṭa intivu satyavalla.
Ā vrata nēma nityaṅgaḷalli
mana vacana kāya trikaraṇa śud'dhavāgi,
bāhyakrīyalli ariva ātmanalli,
mikkāda padārthaṅgaḷalli sadbhāva tānāgi,
ariviṅgū ācārakkū eḍederapillade
krīye vastuvāgi, vastuve krīyāgi,
baṇṇa baṅgāradante nindaṅgave
ācārave prāṇavāda rāmēśvaraliṅgadaṅga.