ನಾನಾ ವ್ರತ ನೇಮ ಭೇದಂಗಳಲ್ಲಿ,
ಅರುವತ್ತುನಾಲ್ಕು ವ್ರತ, ಐವತ್ತಾರು ಶೀಲ,
ಮೂವತ್ತೆರಡು ನೇಮ, ನಿತ್ಯಕೃತ್ಯ ,
ಲೆಕ್ಕಕ್ಕವಧಿಯಿಲ್ಲ, ಅಗೋಚರ.
ಆಚಾರವಾರಿಗೂ ಅಪ್ರಮಾಣ,
ನೀತಿಯ ಮಾತಿಂಗೆ ಆಚಾರ,
ಶಿವಾಚಾರವೆ ಸರ್ವಮಯಲಿಂಗ,
ಪಂಚಾಚಾರಶುದ್ಧಭರಿತ,
ರಾಮೇಶ್ವರಲಿಂಗಕ್ಕೆ ಪ್ರಾಣವಾಗಿರಬೇಕು.
Art
Manuscript
Music
Courtesy:
Transliteration
Nānā vrata nēma bhēdaṅgaḷalli,
aruvattunālku vrata, aivattāru śīla,
mūvatteraḍu nēma, nityakr̥tya,
lekkakkavadhiyilla, agōcara.
Ācāravārigū apramāṇa,
nītiya mātiṅge ācāra,
śivācārave sarvamayaliṅga,
pan̄cācāraśud'dhabharita,
rāmēśvaraliṅgakke prāṇavāgirabēku.