Index   ವಚನ - 83    Search  
 
ನಿರ್ಧನಿಕರು ನಡೆನುಡಿಗಳಿಂದ ತಾಕು-ಸೋಂಕು ಬರಲಾಗಿ ಒಳಹೊರಗು ಎಂಬ ಸಂದೇಹಕ್ಕೆ ಈಡನಿಕ್ಕಿ, ಕಂಡಡೆ ನುಡಿಯದೆ ಬಂದಡೆ ಕರೆಯದೆ ಇಪ್ಪವರ ನೋಡಾ! ಧನಪತಿ-ಶ್ರುತ ದೃಷ್ಟದಲ್ಲಿ ಕೆಡೆನುಡಿದು ಅಂಗಳ ಬಾಗಿಲಲ್ಲಿ ತಳ್ಳಿದಡೆ ಇಲ್ಲಿಯೆ ಲೇಸೆಂದು ಕುಳ್ಳಿರುವರ ಕಂಡು ನಾಚಿತ್ತಯ್ಯಾ ಎನ್ನ ಮನ.ಆಚಾರಕ್ಕೆ ಅರಸುಂಟೆ? ಇಂತೀ ಶೀಲವಂತರೆಲ್ಲರು ಮಹಾಲಕ್ಷ್ಮಿಯ ಮನೆಯ ಎತ್ತಾಗಿ ಉತ್ತು,ತೊತ್ತಾಗಿ ಕೊಬ್ಬಿ, ಕತ್ತೆಯಾಗಿ ಹೊತ್ತು ಸಾವರೆಲ್ಲರು ಸದ್ಭಕ್ತರೆ? ಆಚಾರಕ್ಕೆ ಅರಸಾದಡು ಆಕಾಶವ ನೋಡುವುದಕ್ಕೂ ನೂಕು ತಾಕೆ? ಕಂಡ ಮತ್ತೆ ಒಳಗಿಟ್ಟುಕೊಳ್ಳಬಹುದೆ? ಇದು ಕಾರಣದಲ್ಲಿ ಭಕ್ತಿ ಎನಗೆ ಸ್ವಪ್ನವಾಯಿತ್ತು ಸತ್ಯವೆಂಬುದು ಬೆಚ್ಚಿ ಓಡುತ್ತಿದೆ. ಎನಗಿನ್ನು ಮುಕ್ತಿ ಯಾವುದು? ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ ಎನಗೊಂದು ಗೊತ್ತ ತೋರಾ.