ಭಕ್ತರ ಮನೆಯಲ್ಲಿ ಭಕ್ತರು ಬಂದು
ಕಳವು ಪಾರದ್ವಾರವ ಮಾಡಿದರೆಂದು
ಹೊರಹಾಯ್ಕಿ ಎಂದು ನುಡಿಯಬಹುದೆ?
ಒಡೆಯರು ಭಕ್ತರ ನಿಂದೆಯ ಕೇಳೆನೆಂದು
ತನ್ನೊಡವೆ ಒಡೆಯರು ಭಕ್ತರ ದ್ರವ್ಯವೆಂದು ಭಾವಿಸಿದಲ್ಲಿ
ಮತ್ತೊಬ್ಬ ಅರಿಯದ ತುಡುಗುಣಿ ಮುಟ್ಟಿದಡೆ ಅವ ಕೆಡುವ.
ಆಚಾರಕ್ಕೆ ಹೊರಗು, ತಾನರಿಯದಂತಿರಬೇಕು
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದಲ್ಲಿ ವ್ರತಸ್ಥನ ನೇಮ.
Art
Manuscript
Music
Courtesy:
Transliteration
Bhaktara maneyalli bhaktaru bandu
kaḷavu pāradvārava māḍidarendu
horahāyki endu nuḍiyabahude?
Oḍeyaru bhaktara nindeya kēḷenendu
tannoḍave oḍeyaru bhaktara dravyavendu bhāvisidalli
mattobba ariyada tuḍuguṇi muṭṭidaḍe ava keḍuva.
Ācārakke horagu, tānariyadantirabēku
ācārave prāṇavāda
rāmēśvaraliṅgadalli vratasthana nēma.