ಭಾಜನಕ್ಕೆ ಸರ್ವಾಂಗ ಮುಸುಕಿಟ್ಟಲ್ಲಿ
ಸರ್ವವ್ಯಾಪಾರ ನಿರಸನವಾಗಿರಬೇಕು;
ಸರ್ವಸಂಗವನೊಲ್ಲದೆ ಇರಬೇಕು.
ಒಡೆಯರು ಭಕ್ತರಲ್ಲಿ ನಿಗರ್ವಿಯಾಗಿ
ಬಂದು ನಿಂದುದ ಜಂಗಮಲಿಂಗವ ಮುಂದಿರಿಸಿ,
ಅವರು ಕೈಕೊಂಡು ಮಿಕ್ಕ ಪ್ರಸಾದವ
ಲಿಂಗಕ್ಕೆ ಅರ್ಪಿತವ ಮಾಡಿ,
ಗುರುಲಿಂಗಜಂಗಮದಲ್ಲಿ ಸಂದುಸಂಶಯವಿಲ್ಲದೆ
ಆಚಾರವೆ ಪ್ರಾಣವಾಗಿ ನಿಂದುದು ರಾಮೇಶ್ವರಲಿಂಗದಂಗ.
Art
Manuscript
Music
Courtesy:
Transliteration
Bhājanakke sarvāṅga musukiṭṭalli
sarvavyāpāra nirasanavāgirabēku;
sarvasaṅgavanollade irabēku.
Oḍeyaru bhaktaralli nigarviyāgi
bandu ninduda jaṅgamaliṅgava mundirisi,
avaru kaikoṇḍu mikka prasādava
liṅgakke arpitava māḍi,
guruliṅgajaṅgamadalli sandusanśayavillade
ācārave prāṇavāgi nindudu rāmēśvaraliṅgadaṅga.