Index   ವಚನ - 137    Search  
 
ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ. ಅಲಗಿನ ಮೊನೆಗಂಜುವನ್ನಕ್ಕ ಪಟುಭಟನಲ್ಲ. ತ್ರಿವಿಧದ ಅಂಗವುಳ್ಳನ್ನಕ್ಕ ಲಿಂಗಾಂಗಿಯಲ್ಲ. ಸೋಂಕು ಬಂದಲ್ಲಿ ಆ ಅಂಗವ ಬಿಡದ್ದಡೆ ಶೀಲವಂತನಲ್ಲ. ಈ ನೇಮಂಗಳಲ್ಲಿ ನಿರತನಾದವಂಗೆ ಅಲ್ಲಿ ಇಲ್ಲಿಯೆಂಬ ಅಂಜಿಕೆ ಎಲ್ಲಿಯೂ ಇಲ್ಲದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಯೂ ಇಲ್ಲ.