ವೇದದ ಮೊದಲಧ್ಯಾಯದಲ್ಲಿ ಓಂಕಾರಕ್ಕೆ
ಒಡೆಯನಾರೆಂಬುದ ತಿಳಿದು,
ಸದ್ಯೋಜಾತಾದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ
ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ
ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್||
ಇಂತೀ ವೇದವೇದ್ಯರು ಶಿವಭಕ್ತರಲ್ಲದಿಲ್ಲ.
ಇಂತಿದನರಿಯದೆ, ಘನ ಕಿರಿದೆಂದು
ಹೋರುವವರಿಗೆ ತಿಳಿವಳವ ಕೊಡುವೆ.
ನಿಮ್ಮ ಶಾಂಕರಸಂಹಿತೆಯಲ್ಲಿ ದೃಷ್ಟವ ತಿಳಿದುಕೊಳ್ಳಿ.
ಲಲಾಮಭೀಮಸಂಗಮೇಶ್ವರಲಿಂಗವಲ್ಲದಿಲ್ಲಾ ಎಂದೆ.
Art
Manuscript
Music
Courtesy:
Transliteration
Vēdada modaladhyāyadalli ōṅkārakke
oḍeyanārembuda tiḷidu,
sadyōjātādbhavēdbhūmirvāmadēvādbhavējjalaṁ
aghōrādvanhirityuktastatpuruṣādvāyurucyatē
īśān'yādgaganākāraṁ pan̄cabrahmamayaṁ jagat||
intī vēdavēdyaru śivabhaktaralladilla.
Intidanariyade, ghana kiridendu
hōruvavarige tiḷivaḷava koḍuve.
Nim'ma śāṅkarasanhiteyalli dr̥ṣṭava tiḷidukoḷḷi.
Lalāmabhīmasaṅgamēśvaraliṅgavalladillā ende.