Index   ವಚನ - 13    Search  
 
`ವಿಶಿಷ್ಟಂ ದೀಯತೇ ಜ್ಞಾನಂ ಕ್ಷೀಯತೇ ಪಾಪಸಂಚಯಃ| ಅನಯೋಃ ಶಾಸನೇ ಸಿದ್ಧಾ ದೀಕ್ಷಾ ಕ್ಷಪಣದಾನಯೋಃ'. ಆ ದೀಕ್ಷೆ ನಿರಾಧಾರದೀಕ್ಷೆಯೆಂದು ಸಾಧಾರ ದೀಕ್ಷೆಯೆಂದು ಎರಡು ಪ್ರಕಾರಮಪ್ಪುದು. ಅವರೊಳು ಶಿವನು ನಿರಧಿ ಕರಣನಾಗಿ ತೀವ್ರ ಶಕ್ತಿನಿಪಾತದಿಂದ ವಿಜ್ಞಾನಾಕಲರು ಪ್ರಳಯಾ ಕಲರುಗಳಿಗೆ ಮಾಡುವ ದೀಕ್ಷೆ ನಿರಾಧಾರದೀಕ್ಷೆ ಎನಿಸಿಕೊಂಬುದು. ಗುರುಮೂರ್ತಿಯನಾಶ್ರ ಯಿಸಿ ಮಂದಶಕ್ತಿನಿಪಾತ ದತ್ತಣಿಂ ಸಕಲರುಗಳಿಗೆ ಮಾಡೂದು ಸಾಧಾರದೀಕ್ಷೆ ಎನಿಸಿಕೊಂಬುದು. ಇಂತೆಂದು ಪಾರಮೇಶ್ವರ ತಂತ್ರಂ ಪೇಳೂದು, ಶಾಂತ ವೀರೇಶ್ವರಾ.