`ಶುದ್ಧ ಶೈವಮಿತಿ ಪ್ರೋಕ್ತಂ| ವೀರಶೈವಮತಃ ಶ್ರುಣು': ಈ ಪ್ರಕಾರದಿಂದ
ಶುದ್ಧಶೈವವು ನಿರೂಪಿಸಲ್ಪಟ್ಟಿತ್ತು. ಅಲ್ಲಿಂದ ಮೇಲೆ ವೀರಶೈವವನು
ಕೇಳು: `ವೀರತಂತ್ರೇ ಸರ್ವೇಷಾಮಪಿ ಶೈವಾನಾಂ ವೀರಶೈವಂ ಮಹೋತ್ತಮಂ||
ಸಲಭಾದೇವ ಪೂಜಾ ಸು| ಸುಲಭಂ ಚ ಕ್ರಿಯಾವಹಂ'|| ಎಲೆ ದೇವಿಯೆ,
ಸಮಸ್ತ ಶೈವಂಗಳೊಳಗೆ ವೀರಶೈವವೆ ಅತ್ಯುತ್ತಮವಾದುದು. ಆ ವೀರಶೈವ
ಮಾಡುವ ಶಿವಪೂಜೆ ಲೇಸಾಗಿ ಸುಲಭವಾದಂಥಾದು. ಪೂಜಾದಿಗಳ ಮಾಟವು
ಸುಲಭವಹಂಥಾದುದು. ಈಶ್ವರನು ದೇವಿಯರಿಗೆ ನಿರೂಪಿಸುತ್ತಿರ್ದನಯ್ಯ
ಶಾಂತವೀರೇಶ್ವರಾ.
Art
Manuscript
Music
Courtesy:
Transliteration
`Śud'dha śaivamiti prōktaṁ| vīraśaivamataḥ śruṇu': Ī prakāradinda
śud'dhaśaivavu nirūpisalpaṭṭittu. Allinda mēle vīraśaivavanu
kēḷu: `Vīratantrē sarvēṣāmapi śaivānāṁ vīraśaivaṁ mahōttamaṁ||
salabhādēva pūjā su| sulabhaṁ ca kriyāvahaṁ'|| ele dēviye,
samasta śaivaṅgaḷoḷage vīraśaivave atyuttamavādudu. Ā vīraśaiva
māḍuva śivapūje lēsāgi sulabhavādanthādu. Pūjādigaḷa māṭavu
sulabhavahanthādudu. Īśvaranu dēviyarige nirūpisuttirdanayya
śāntavīrēśvarā.