Index   ವಚನ - 41    Search  
 
`ವಿದ್ಯಾಯಾಂ ಶಿವರೂಪಾಯಾಂ ವಿಶೇಷಾದ್ರಮಣಂ ಯತಃ| ತಸ್ಮಾದೇತೇ ಮಹಾಭಾಗಾ ವೀರಶೈವಾ ಇತಿ ಸ್ಮೃತಾಃ' ಇಂತೆಂದು ಶಿವಸ್ವರೂಪವಾದಂಥ ಜ್ಞಾನದಲ್ಲಿ ಯಾವ ಕಾರಣದಿಂದ ಆಗಿ ವಿನೋದಿಸುತ್ತಿಹರು, ಅದು ಕಾರಣದ ದೆಸೆಯಿಂದೆ ಈ ಷಡ್ಗುಣೈಶ್ವರ್ಯವುಳ್ಳವರು ವೀರಶೈವರೆಂದು ನೆನೆಯಲ್ಪಟ್ಟಂಥ ವರಯ್ಯ ಶಾಂತವೀರ ಪ್ರಭುವೇ.