`ಶೇಷಂ ದೀಕ್ಷಾ ಕ್ರಿಯಾಂ ಕೃತ್ವಾ ಮಲತ್ರವಿಮೋಚನಂ| ಗುರು ಶಿಷ್ಯಂ
ಸಮಾಲೋಕ್ಯ ತತ್ವದೇಹಂ ವಿಚಿಂತಯೇತ್|| ಎಂದು ಶಿವಾಚಾರ್ಯನು ಪೇಳಿದ
ದೀಕ್ಷಾಸತ್ಕರ್ಮವೆಲ್ಲವನು ಮಾಡಿ, ಮಲತ್ರಯಂಗಳನು ತೋಲಂಗಿ ಸುಹವನು,
ವೀರಮಾಹೇಶ್ವರ ದೀಕ್ಷಾಪಟದಲ್ಲಿ ಹೇಳಿದ ಹಾಂಗೆ ಆಡಿ, ಶಿಷ್ಯನಂ ಕೃಪಾಲೋಕನದಿಂ
ನೋಡಿ ತತ್ವ ದೇಹದ ಹಾಂಗೆ ಚಿಂತಿಸುವುದು ಶಾಂತವೀರೇಶ್ವರಾ.