Index   ವಚನ - 80    Search  
 
ಬಳಿಕಾ ಪರಮ ಪವಿತ್ರ ದ್ರವ್ಯಂಗಳಿಂ ಮಾಲ್ಪ ಉಪಚಾರಂಗಳೊಳಗೆ ತ್ರಿವಿಧೋಪಚಾರ ಪಂಜೋಪಚಾರ ಅಷ್ಟೋಪಚಾರ ದಶೋಪಚಾರ ಷೋಡ ಶೋಪಚಾರ ಚತುರ್ವಿಂತ್ಯುಪಚಾರ ದ್ವಾತ್ರಿಂಶದುಪಚಾರಂಗಳುಂಟವರಲ್ಲಿ [ಧ್ಯಾನ] ಆವಾಹನ ಆಸನ ಪಾದ್ಯ ಅರ್ಘ್ಯ ಆಚಮನೀಯ ಸ್ನಾನ ವಸ್ತ್ರ ಯಜ್ಞ ಸೂತ್ರ ಭೂಷಣ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ಮುಖವಸನ ನೀರಾಜನ ದರ್ಪಣ ಫಲಾರ್ಪಣ ತಾಂಬೂಲ ಪ್ರದಕ್ಷಿಣ ನಮಸ್ಕಾರ ಸ್ತೋತ್ರ ಪುರಾಣಪಠಣ ಛತ್ರ ಚಾಮರ ವ್ಯಜನ ಶಯ್ಯೆ ಸಂಗೀತ ನೃತ್ಯ ವಾದ್ಯ ಆತ್ಮರೋಪಣಯೆಂಬ ದ್ವಾತ್ರಿಂಶದುಪಚಾರಂಗಳಂ [ಸಮಂತ್ರಕ]ಮಾಗಿ ಮಾಡಿ, ಬಳಿಕೀ ಸಮಸ್ತ ಪೂಜಾ ದ್ರವ್ಯಗಳಿಲ್ಲದಿರೆ ಜಲಮಾತ್ರ ಪುಷ್ಪಮಾತ್ರದಿಂದಿರ್ಚಿಸಲಾ ಸಕಲ ಸಾಂಗಿಕಮಾದರ್ಚನೆಗೆ ಸಮಾನವಹುದಾಗಿ ಪೂಜಕಂಗೆ ಶ್ರದ್ಧಾಭಕ್ತಿಯೆ ಮುಖ್ಯಮಾಗಿಹುದಾ ಭಕ್ತಿಯೆ ಈಶ್ವರವಿಷಯಮಾದ ಶ್ರವಣ ಕೀರ್ತನ ಸ್ಮರಣ ಪಾದಸೇವೆ ಪೂಜೆ ವಂದನೆ ದಾಸ್ಯ ಸಖ್ಯ ಆತ್ಮಾರ್ಪಣಮೆಂಬ ನವವಿಧಮಾಗಿರ್ಪುದೆಂದರಿದಿಂತು ಪೀಠಸ್ಥ ಶಿವಲಿಂಗದ ಬಹಿರಂಗಪೂಜೆಯಂ ವಿಸ್ತರಿಸಿ, ಬಳಿಕಿಹ ಲೋಕಫಲವನಿಚ್ಛೈಸು ಮಾತ ನಾದೊಡಂ, ಪರಲೋಕಫಲವಂ ಕಾಮಿಸುವಾತನಾದೊಡಂ, ಸಕಲ ಜನಕ್ಕೆ ಹಿತಮಂ ಬಯಸುವಾತನಾದೊಡಂ, ಬಾಹ್ಯದ್ರವ್ಯಗಳಿಂದಿಂತು ಶಿವಪೂಜೆಯಂ ಮಾಡವೇಳ್ಕುಮೆಂದು ನಿಶ್ಚಸಿರುವದಯ್ಯಾ ಶಾಂತವೀರೇಶ್ವರಾ.