Index   ವಚನ - 82    Search  
 
ಬಳಿಕಿಂತು ಹೃತ್ಕಮಲಕರ್ಣಿಕಾಮಧ್ಯದಲ್ಲಿ ಗುರುವಿಚಿತ್ತಿಷ್ಟಲಿಂಗದಲ್ಲಿ ಸಿಂಹಾಸನದಲ್ಲಿ ಮಾಡುವಾತ್ಮಾರ್ಥವಾದ ಪೂಜೆಗಳಂ ಗ್ರಾಮ ನದಿತೀರಾದಿ ಕ್ಷೇತ್ರಂಗಳಲ್ಲಿ ದೇವದಾನವಾದಿಗಳಿಂ ಪ್ರತಿಷ್ಠಿತಮಾದ ಲಿಂಗಂಗಳಲ್ಲಿ ಮಾಳ್ಪ ಪದಾರ್ಥಪೂಜೆಗಳಂ ಬಿಡದಾರಾಧಿಸುತ್ತಮಾತ್ಮಾರ್ಥ ಪೂಜೆಯೋಳೀಶ್ವ ರಾವರಣಮಾದ ವೃಷಭ ಭಾಸ್ಕರ ವೀರಭದ್ರ ಮಾತೃಕೆ ಸ್ಕಂದ ಕ್ಷೇತ್ರಪಾಲ ಬ್ರಹ್ಮ ವಿಷ್ಣು ರುದ್ರರೆಂಬ ದೇವತೆಗಳನವರವರ ಸ್ಥಾನಕ್ರಮವರಿದಾರಾಧಿಸುತ್ತೆ ಬೇರೆ ಸ್ಥಾಪಿತಂಗಳಾದ ವಿಷ್ಣ್ವಾದಿ ದೇವತಾಭಜನೆಗಳಂ ತ್ಯಜಿಸಿ, ತನ್ನಿಷ್ಟಲಿಂಗವು ಚೋರಾದಿಗಳಿಂ ಪೋಗಿ ಬಾರದಿರ್ದೊಡೊಂದು ಲಕ್ಷ ಅಘೋರಮಂತ್ರ ಜಪದಿ ಶುದ್ಧಾತ್ಮನಾಗಿ, ಮೇಲಾಚಾರ್ಯನಿಂ ವಿಧ್ಯುಕ್ತಮಾಗಿ ಮತ್ತೆ ಪಡೆದು ವ್ರತ ನಿಯ ಮಾದಿ ಲೋಪಮಾಗ ಲಷ್ಟೋತ್ತರಶತ ಗಾಯತ್ರಿ ಜಪದಿಂ ಪರಿಶುದ್ಧಿವಡೆದು, ಬಳಿಕ ಪರಮಪವಿತ್ರಮಾದ ಶಿವಪಾದೋದಕ ಸ್ವೀಕಾರ ಶಿವಪ್ರಸಾದಾನ್ನ ಸೇವನೆ ಶಿವಪ್ರಾಸಾದಾಂಬುಪಾನ ಶಿವನಿರ್ಮಾಲ್ಯದಳ ಕುಸುಮಧಾರಣಂಗಳು ಸದ್ಬ್ರಾಹ್ಮಣರು ಮೊದಲಾದ ಶ್ರೀವಿಶಿಷ್ಟರ್ಗೆ ಕರ್ತವ್ಯವಹುದು. ಮಿಕ್ಕ ಪಾಪಾತ್ಮರ್ಗೆ ಪಾಷಂಡಿಗಳಿಗೆ ಶಾಪದಗ್ಧರಿಗೆ ಶಿವಸಂಸ್ಕಾರಹೀನರ್ಗೆ ನಾಸ್ತಿಕರ್ಗೆ ವೇದಬಾಹ್ಯರಿಗೆ ಯೋಗ್ಯವಲ್ಲೆಂದು ಪರಿಭಾವಿಸುತ್ತಿಂತು ಸಕಲಸತ್ಕ್ರಿಯೆಗಳಿಂ ನಿರ್ಮಲಾಂತಃಕರಣನಾಗಿರ್ಪಾತನೆ ಶುದ್ಧ ಶೈವನಪ್ಪನಯ್ಯಾ ಶಾಂತವೀರ ಪ್ರಭುವೇ.