ಜಾತಿಸೂತಕ ಜನನಸೂತಕ ಪ್ರೇತಸೂತಕ ಉಚ್ಛಿಷ್ಟಸೂತಕ ರಜಃಸೂತಕ ವೆಂಬ
ವೆಂಬ ಪಂಚಸೂತಕವನತಿಗಳೆದಾತನಾಗಿ, ಲಿಂಗಾಚಾರ ಸದಾಚಾರ ಭಕ್ತ್ಯಾಚಾರ
ಶಿವಾಚಾರ ಗಣಾಚಾರವೆಂಬ ಪಂಚಾಚಾರನಿಷ್ಠನಾಗಿ ದಾಸತ್ವ ವೀರದಾಸತ್ವ
ಭೃತ್ಯತ್ವ ವೀರಭೃತ್ಯ[ತ್ವ] ಸಮಯಾಚಾರತ್ವ ಸಕಲಾವಸ್ಥಾತ್ವಂಗಳೆಂಬ ಷಡ್ವಿಧ
ಸಜ್ಜನತ್ವಯುಕ್ತನಾಗಿ, ದೇಶಕಾಲ ಕಲ್ಪಿತಾದಿ ಲೌಕಿಕಾಚಾರಂಗಳಂ ವಿೂರಿ
ಸ್ವತಂತ್ರ ಶೀಲನಾಗಿ, ಶಿವಾತ್ಮರ್ಗೆ ಭೇದಭ್ರಾಂತಿದೋರದಾತನಾಗಿ, ಉಪನಿಷ
ದ್ವಾಕ್ಯ ಜನಿತವಿದ್ಯೆಯಲ್ಲಿ ರಮಿಸುವ ಶೈವನಪ್ಪುದರಿಂ ತತ್ಸಂಜ್ಞೆಯುಳ್ಳಾತನಾಗಿ,
ಜಗತ್ಪೂಜ್ಯನಾಗಿಪ್ಪಾತನೆ ವೀರಶೈವನಪ್ಪನಯ್ಯಾ ಶಾಂತವೀರೇಶ್ವರಾ.
Art
Manuscript
Music
Courtesy:
Transliteration
Jātisūtaka jananasūtaka prētasūtaka ucchiṣṭasūtaka rajaḥsūtaka vemba
vemba pan̄casūtakavanatigaḷedātanāgi, liṅgācāra sadācāra bhaktyācāra
śivācāra gaṇācāravemba pan̄cācāraniṣṭhanāgi dāsatva vīradāsatva
bhr̥tyatva vīrabhr̥tya[tva] samayācāratva sakalāvasthātvaṅgaḷemba ṣaḍvidha
sajjanatvayuktanāgi, dēśakāla kalpitādi laukikācāraṅgaḷaṁ viūri
svatantra śīlanāgi, śivātmarge bhēdabhrāntidōradātanāgi, upaniṣa
dvākya janitavidyeyalli ramisuva śaivanappudariṁ tatsan̄jñeyuḷḷātanāgi,
jagatpūjyanāgippātane vīraśaivanappanayyā śāntavīrēśvarā.