Index   ವಚನ - 9    Search  
 
ಅಯ್ಯಾ ನಿಮ್ಮಲ್ಲಿ ಸಾರೂಪ್ಯವರವ ಬೇಡುವೆನೆ? ಬ್ರಹ್ಮನ ಶಿರಸ್ಸುವ ಹೋಗಾಡಿದೆ. ಅಯ್ಯಾ ನಿಮ್ಮಲ್ಲಿ ಸಾಮೀಪ್ಯವರವ ಬೇಡುವೆನೆ? ವಿಷ್ಣು ದಶಾವತಾರಕ್ಕೆ ಬಂದ. ಅಯ್ಯಾ ನಿಮ್ಮಲ್ಲಿ ಸಾಯುಜ್ಯವರವ ಬೇಡುವೆನೆ? ರುದ್ರ ಜಡೆಯ ಹೊತ್ತು ತಪಸ್ಸಿರುತ್ತೈದಾನೆ. ಅಯ್ಯಾ ನಿಮ್ಮಲ್ಲಿ ಶ್ರೀಸಂಪತ್ತೆಂಬ ವರವ ಬೇಡುವೆನೆ? ಲಕ್ಷ್ಮೀ ಪರಾಂಗನೆ ಪರಸ್ತ್ರೀ ಸಕಳೇಶ್ವರಯ್ಯಾ ಆವ ವರವನೂ ಒಲ್ಲೆನು. ಚೆನ್ನಬಸವಣ್ಣನ ಶ್ರೀಪಾದದ ಹತ್ತೆ ಇಪ್ಪಂಥ ವರವಕೊಡು.