Index   ವಚನ - 11    Search  
 
ಅರಿವನಾಹಾರಗೊಂಬುದೆ ಪರಮಸುಖ. ಮರವೆಯ ತೆರಹುಂಟೆ? ಶಿವೈಕ್ಯಂಗೆ ಇತರ ಸುಖವೆ ವ್ಯವಹಾರ. ಅರುಹಿರಿಯರ ಸಂಗಸುಖವೆ ಆಹಾರ. ಶ್ರುತಿಯಿಂದತಿಶಯ ಆ ಚರಿತನ ಮನವ, ಮಹಂತ ಸಕಳೇಶ್ವರದೇವ, ತಾನೆ ಬಲ್ಲ.