ಅಷ್ಠಮದಂಗಳೆಂಬ ಆನೆಯ ಮೆಟ್ಟಿ
ಅವಿನಾಶವೆಂಬ ಕಂತೆಯ ತೊಟ್ಟು,
ಅನಾಹತವೆಂಬ ಕರ್ಪರವಂ ಕೊಂಡು,
ಅಕಾಯಕಲ್ಪಿತವೆಂಬ ಯೋಗದಂಡಮಂ ಪಿಡಿದು,
ಕಾಯಕಲ್ಪಿತ ಜೀವನೋಪಾಯವನತಿಗಳೆದು,
ಮಾಯಾಪ್ರಪಂಚು ನಾಸ್ತಿಯಾಗಿ,
ಶಿವಧ್ಯಾನ ಕಾರಣ ಸದಾಚಾರವೆಡೆಗೊಂಡು,
ಸಮ್ಯಜ್ಞಾನವೆಂಬ ಶಿವಪುರಮಂ ಪೊಕ್ಕು,
ಸಮತೆಯೆಂಬ ಓಗರವನೆತ್ತುತ್ತ,
ಅಜ್ಞಾನವೆಂಬ ನಾಯ ಹೊಡೆಹುತ್ತ,
ಉಪಪಾತಕಕೋಟಿನಾಂ ಬ್ರಹ್ಮಹತ್ಯಶತಾನಿ ಚ|
ದಹಂತಿ ಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್ ||
ಎಂದುದಾಗಿ, ಸಕಲಜೀವಂಗಳ ಕರ್ಮಕ್ಷಯವ
ಮಾಡಲೆಂದು ಸುಳಿವನಯ್ಯ.
ಮಹಂತ ಸಕಳೇಶ್ವರದೇವಾ, ನಿಮ್ಮ ಶರಣ.
Art
Manuscript
Music
Courtesy:
Transliteration
Aṣṭhamadaṅgaḷemba āneya meṭṭi
avināśavemba kanteya toṭṭu,
anāhatavemba karparavaṁ koṇḍu,
akāyakalpitavemba yōgadaṇḍamaṁ piḍidu,
kāyakalpita jīvanōpāyavanatigaḷedu,
māyāprapan̄cu nāstiyāgi,
śivadhyāna kāraṇa sadācāraveḍegoṇḍu,
samyajñānavemba śivapuramaṁ pokku,
samateyemba ōgaravanettutta,
ajñānavemba nāya hoḍ'̔ehutta,
upapātakakōṭināṁ brahmahatyaśatāni ca|
dahanti śēṣapāpāni śivabhaktasya darśanāt ||
endudāgi, sakalajīvaṅgaḷa karmakṣayava
māḍalendu suḷivanayya.
Mahanta sakaḷēśvaradēvā, nim'ma śaraṇa.