Index   ವಚನ - 25    Search  
 
ಊರಿಗೊಕ್ಕಲಹ, ಹೆಂಡತಿಗೆ ಗಂಡನಹ. ಮಕ್ಕಳಿಗೆ ತಂದೆಯಹ, ಮಸಣಕ್ಕೆ ಹೆಣನಹ. ಸಕಳೇಶ್ವರದೇವಾ, ನಿಮ್ಮ ಶರಣನ ಪರಿ ಬೇರೆ.