ಕಪ್ಪೆಗೆ ಕಾಲು ಬಂದಲ್ಲಿ ಫಲವೇನಯ್ಯಾ,
ಚತುಃಪಾದಿಯಂತೆ ನಡೆಯಬಲ್ಲುದೆ?
ಕೋಳಿಗೆ ಪುಕ್ಕ ಬಂದಲ್ಲಿ ಫಲವೇನಯ್ಯಾ,
ಪಕ್ಷಿಯಂತೆ ಹಾರಬಲ್ಲುದೆ?
ನಾಯಿಗೆ ಬಾಲ ಬಂದಲ್ಲಿ ಫಲವೇನಯ್ಯಾ, ಭಕ್ತಿಗುಣವಿಲ್ಲದಿದ್ದಡೆ
ಭಂಗಿಯ ತಿಂದ ಭೂತನಂತೆ ಅಂಗವಿಕಾರಕ್ಕೆ ಹರಿವರು
ಏತರಭಕ್ತರ ಮಕ್ಕಳು ಹೇಳಾ ಸಕಳೇಶ್ವರಯ್ಯಾ
Art
Manuscript
Music
Courtesy:
Transliteration
Kappege kālu bandalli phalavēnayyā,
catuḥpādiyante naḍeyaballude?
Kōḷige pukka bandalli phalavēnayyā,
pakṣiyante hāraballude?
Nāyige bāla bandalli phalavēnayyā, bhaktiguṇavilladiddaḍe
bhaṅgiya tinda bhūtanante aṅgavikārakke harivaru
ētarabhaktara makkaḷu hēḷā sakaḷēśvarayyā