ಕರ್ತನೊಬ್ಬನೆ ದೇವ, ಸತ್ಯವೆ ಸುಭಾಷೆ,
ಭೃತ್ಯಾಚಾರವೆ ಆಚಾರವಯ್ಯಾ.
ಮತ್ತೆ ದೇವರಿಲ್ಲ, ಮತ್ತೆ ಆಚಾರವಿಲ್ಲ,
ಮತ್ತೆ ಸುಭಾಷೆಯೆಂಬುದಿಲ್ಲ .
ಮಹಂತ ಸಕಳೇಶ್ವರದೇವರನೊಲಿಸಿದ ಪುರಾತರ ಪಥವಿದು.
ಅವಿತಥವಿಲ್ಲದೆ ನಂಬುವದು.
Art
Manuscript
Music
Courtesy:
Transliteration
Kartanobbane dēva, satyave subhāṣe,
bhr̥tyācārave ācāravayyā.
Matte dēvarilla, matte ācāravilla,
matte subhāṣeyembudilla.
Mahanta sakaḷēśvaradēvaranolisida purātara pathavidu.
Avitathavillade nambuvadu.