Index   ವಚನ - 52    Search  
 
ಗಿರಿಯ ಕರದಿಂದೆತ್ತಿದಡೇನು? ಹರಿವ ವಾರುಧಿಯನಾಪೋಷಣಂಗೊಂಡಡೇನು? ಗಗನ ಗಮನದಲ್ಲಿ ಸುಳಿದಡೇನು? ಇವರೆಲ್ಲರೂ ಪವನದ ಬಳಿಯಲಭ್ಯಾಸಿಗಳು. ಅರ್ಚಿಸಿ, ಪೂಜಿಸುವ ಮಚ್ಚರದೊಳಗಣ ಲೌಕಿಕರ ಮೆಚ್ಚ, ಸಕಳೇಶ್ವರದೇವ, ವೇಷಡಂಬಕರ.