Index   ವಚನ - 59    Search  
 
ಜನಮೆಚ್ಚೆ ಶುದ್ಧನಲ್ಲದೆ, ಮನಮೆಚ್ಚೆ ಶುದ್ಧನಲ್ಲವಯ್ಯಾ ನುಡಿಯಲ್ಲಿ ಜಾಣನಲ್ಲದೆ, ನಡೆಯಲ್ಲಿ ಜಾಣನಲ್ಲವಯ್ಯಾ. ವೇಷದಲ್ಲಿ ಅಧಿಕನಲ್ಲದೆ, ಭಾಷೆಯಲ್ಲಿ ಅಧಿಕನಲ್ಲವಯ್ಯಾ. ಧನ ದೊರಕದಿದ್ದಡೆ ನಿಸ್ಪೃಹನಲ್ಲದೆ, ಧನ ದೊರಕಿ ನಿಸ್ಪೃಹನಲ್ಲವಯ್ಯಾ. ಏಕಾಂತದ್ರೋಹಿ, ಗುಪ್ತಪಾತಕ, ಯುಕ್ತಿಶೂನ್ಯಂಗೆ ಸಕಳೇಶ್ವರದೇವ ಒಲಿ ಒಲಿಯೆಂದೆಡೆ, ಎಂತೊಲಿವನಯ್ಯಾ?