Index   ವಚನ - 66    Search  
 
ದೇವಾ, ನಿಮ್ಮಲ್ಲಿ ಬಯಸಿ ಬೇಡುವಡೆ ಏನಿಲ್ಲ ದೇವಾ? ಆಯುವ ಬೇಡುವೆನೆ? ಸಂಸಾರಕ್ಕಾನಂಜುವೆ. ಸ್ತ್ರೀಯ ಬೇಡುವೆನೆ? ಪರಾಂಗನೆಯ ಪಾಪ. ಮುಕ್ತಿಯ ಬೇಡುವೆನೆ? ಅದು ನಿನ್ನ ಪದವಿ. ಸಕಳೇಶ್ವರದೇವಾ, ಆನೇನುವನೊಲ್ಲೆ. ನಿಮ್ಮ ಶರಣರ ಸಸಂಗವುಳ್ಳಡೆ ಸಾಕು.