ಧನವ ಪಡೆದು ವಿಭೋಗವನರಿಯದ ಲೋಭಿಗೆ
ಸಿರಿಯೇಕೆ ಬಯಸುವಂತೆ?
ಲೇಸ ಕಂಡು, ಮನ ಬಯಸಿ, ಪಂಚಭೂತಿಕ ಸುಯ್ದು ಮರುಗುವಂತೆ,
ಕನ್ನೆ ಅಳಿಯಳು, ಕನ್ನೆ ಉಳಿಯಳು.
ಜವ್ವನ ತವಕದಿಂದ ಅವಳು
ಕಂಗಳ ತಿರುಹುತ್ತ ಮತ್ತೊಬ್ಬಂಗೊಲಿದಡೆ,
ಅದೆಂತು ಸೈರಿಸುವೆ?
ನಿಧಾನವ ಕಾಯ್ದಿಪ್ಪ ಬೆಂತರನಂತೆ ನೋಡಿ ಸೈರಿಸುವೆ?
ಸಂಸಾರದಲ್ಲಿ ಹುಟ್ಟಿ, ಭಕ್ತಿಯನರಿಯದ ಭವದುಃಖಿಯ ಕಂಡು,
ಸಕಳೇಶ್ವರದೇವ ನಗುವ.
Art
Manuscript
Music
Courtesy:
Transliteration
Dhanava paḍedu vibhōgavanariyada lōbhige
siriyēke bayasuvante?
Lēsa kaṇḍu, mana bayasi, pan̄cabhūtika suydu maruguvante,
kanne aḷiyaḷu, kanne uḷiyaḷu.
Javvana tavakadinda avaḷu
kaṅgaḷa tiruhutta mattobbaṅgolidaḍe,
adentu sairisuve?
Nidhānava kāydippa bentaranante nōḍi sairisuve?
Sansāradalli huṭṭi, bhaktiyanariyada bhavaduḥkhiya kaṇḍu,
sakaḷēśvaradēva naguva.