ನಿನ್ನ ಹಂಗೇನು ಹರಿಯೇನು, ಅಂಜದೆ ನುಡಿವೆನು.
ನೀ ಹೊರೆವ ಜಗದ ಜೀವರಾಸಿಗಳೊಳಗೆ,
ಆಸೆಗೆ ಬೇರೆ ಕೊಟ್ಟುದುಳ್ಳಡೆ ಹೇಳು ದೇವಾ.
ಅರ್ಚಿಸಿ ಪೂಜಿಸಿ, ನಿಮ್ಮ ವರವ ಬೇಡಿದೆನಾದಡೆ
ಬಾರದ ಭವಂಗಳಲ್ಲಿ ಎನ್ನ ಬರಿಸು,
ಸಕಳೇಶ್ವರದೇವಾ.
Art
Manuscript
Music
Courtesy:
Transliteration
Ninna haṅgēnu hariyēnu, an̄jade nuḍivenu.
Nī horeva jagada jīvarāsigaḷoḷage,
āsege bēre koṭṭuduḷḷaḍe hēḷu dēvā.
Arcisi pūjisi, nim'ma varava bēḍidenādaḍe
bārada bhavaṅgaḷalli enna barisu,
sakaḷēśvaradēvā.