ನೀನೆನ್ನನೊಲ್ಲದಿದ್ದರೆ ನಾನಾರ ಸಾರಿ ಬದುಕಲಯ್ಯಾ?
ಮೇಕುದೋರಿ ಗಂಡನ ಮಾಡಿಕೊಂಡವರುಂಟೆ?
ನಿಮ್ಮಿಂದಲಧಿಕರುಂಟೆ ಹೇಳಾ?
ತಲೆಯೂರಿ ತಪಿಸಿದಡೆ,
ಅಲ್ಲಿ ಮೂರ್ತಿಯ ತೋರುವಾತ ನೀನೆ.
ಕಣ್ಣಮುಚ್ಚಿ ಕಮರಿಯ ಹಾಯ್ದರೆಯೂ
ಅಲ್ಲಿ ಪದವಿಯ ಕೊಡುವವನು ನೀನೆ.
ನೀನು ಕರುಣಿಸುವನ್ನಕ್ಕ,
ನಾನು ಹೀಗಿದೇನೆ ಹೇಳಾ, ಸಕಳೇಶ್ವರಾ.
Art
Manuscript
Music
Courtesy:
Transliteration
Nīnennanolladiddare nānāra sāri badukalayyā?
Mēkudōri gaṇḍana māḍikoṇḍavaruṇṭe?
Nim'mindaladhikaruṇṭe hēḷā?
Taleyūri tapisidaḍe,
alli mūrtiya tōruvāta nīne.
Kaṇṇamucci kamariya hāydareyū
alli padaviya koḍuvavanu nīne.
Nīnu karuṇisuvannakka,
nānu hīgidēne hēḷā, sakaḷēśvarā.