Index   ವಚನ - 84    Search  
 
ಪಿನಾಕಿಯ ಅಲ್ಲಟಪಲ್ಲಟದಿಂದ ಪಂಚೈವರ ಪ್ರಾಣಂಗಳು ಸಂಚಗೆಡವೆ, ಹಲವು ಕಾಲ? ಲಿಂಗದ ಮೇಲಣ ನೋಟಭಾವ ತಪ್ಪಿ, ತನು ಉರುಳಿ ಲಿಂಗವ ಬೆರಸನೆ ಅನುಮಿಷನು? ಒಬ್ಬ ಜಂಗಮ ಮನೆಗೆ ಬಂದಡೆ, ಇಲ್ಲೆಂದು ಕಳುಹಿದಡೆ, ಅಲ್ಲಿ ಹೋಗದೆ ಬಸವರಾಜನ ಪ್ರಾಣ? ಬರಿದಳಲುವ ಬೆಳ್ಳಂಬವಿಲ್ಲದೆ ಪರಮಪದವುಳ್ಳವರ ಮಹಾಬೆಳಗೊಳಕೊಳ್ಳದೆ? ತನ್ನಿಚ್ಛೆಯಲಾಗಿ ಹೋಗುತಿಪ್ಪ ಲಿಂಗದಿಚ್ಛೆಯನರಿಯದವರ ಕಂಡಡೆ, ಮೆಚ್ಚುವನೆ ನಮ್ಮ ಸಕಳೇಶ್ವರದೇವ?