Index   ವಚನ - 87    Search  
 
ಬಲೀಂದ್ರನ ಸಿರಿಗಿಂದ ಅಧಿಕರನಾರನೂ ಕಾಣೆನಯ್ಯಾ. ಅಂಥಾ ಸಂಪತ್ತು ಮೂರಡಿಗೆಯ್ದದು. ಕೆಡುವಂತಿದ್ದುದೆ ಕೌರವನ ರಾಜ್ಯ? ಮಡಿವಂತಿದ್ದುದೆ ರಾವಳನ ಬಲಾಧಿಕೆ? ಪರಸ್ತ್ರೀ, ಲಕ್ಷ್ಮೀ ಆರಿಗೆಯೂ ನಿತ್ಯವಲ್ಲ. ಇದು ಶಾಶ್ವತವೆ, ಸಕಳೇಶ್ವರದೇವಾ?