Index   ವಚನ - 92    Search  
 
ಭಕ್ತನೆಂಬೆನು ಬಸವಣ್ಣನ, ಐಕ್ಯನೆಂಬೆನು ಚಿಕ್ಕಣ್ಣನ. ಶರಣನೆಂಬೆನು ಪ್ರಭುದೇವರ. ಹಿಂದೆ ಆದವರಿಲ್ಲ, ಮುಂದೆ ಆಹವರಿಲ್ಲ. ಸಕಳೇಶ್ವರದೇವಾ, ನಿಮ್ಮ ಶರಣರು ಮೂವರೆ.