Index   ವಚನ - 124    Search  
 
ಸರವರದ ಮಂಡೂಕನು ತಾವರೆಯ ನೆಳಲ ಸಾರಿದಡೆ ಪರಿಮಳವದಕೆ ಅಯ್ಯಾ? ಆ ಅರಿಯಬಾರದು, ಮದಾಳಿಗಲ್ಲದೆ. ಸಕಳೇಶ್ವರದೇವಾ, ನಿಮ್ಮ ವೇದಿಸಿದ ವೇದ್ಯಂಗಲ್ಲದೆ, ನಿಮ್ಮ ನಿಲವನರಿಯಬಾರದು.