Index   ವಚನ - 133    Search  
 
ಹಿರಿಯ ಅಡವಿಯ ಕಲ್ಲಗವಿಯ ಗಹ್ವರದೊಳಗೆ ಬಿದಿರಲಳಿಗೆಯಲಗ್ಘವಣಿಯ ತಂದು, ದೇವದಾರಿಯ ಗಂಧವ ತೇದು, ತಾವರೆಯ ನೆಯ್ದಿಲ ಹೂವನೆ ತಂದು, ಲಿಂಗವ ಸಿಂಗಾರವ ಮಾಡಿ, ನೋಡುವದೆಂದು ದೊರಕೊಂಬುವುದೊ ಎನಗೆ? ಸಕಳೇಶ್ವರದೇವಾ, ಮುಂದಿನ ವರವನೊಲ್ಲೆ. ಇಂದು ಎನಗಿದು ಪರಮಸುಖವು.