Index   ವಚನ - 32    Search  
 
ಕರ್ಮದಿಂದ ಬೊಮ್ಮದಿಂದ ಪುತ್ರರಿಂದ ಗೋತ್ರದಿಂದ ಕಳತ್ರಯರಿಂದ ಗತಿಯಾಗದೆಂದು ಸಾರಿತ್ತು ಯಜುರ್ವೇದ. ಅಪಾಧಿಯನಿಟ್ಟು ನಿರುಪಾಧಿಕನಾಗಿ, ಅಂಗವನಾರಾಧಿಸಿ ನಿತ್ಯರಾದರೆಂದು ಸಾರಿತ್ತು ಯಜುರ್ವೇದ. 'ಓಂ ನ ಕರ್ಮಣಾ ನ ಪ್ರಜಾಯಾಧನೇನ ತ್ಯಾಗೇನೈಕೇನ ಅಮೃತತ್ವಮಾನಶುಃ' ಎಂದುದು ಶ್ರುತಿವಾಕ್ಯ. ಈ ಪರಿಯಲಿ ವೇದ ಹೊಗಳಲ್ಕೆ, ಎಮ್ಮ ಪುರಾತನರು ನಡೆದರು, ನಡೆದು ಮೆರೆಯಿತ್ತು, ಕಂಡು ನಂಬರು, ಬಸವಪ್ರಿಯ ಕೂಡಲಚೆನ್ನಸಂಗಯ್ಯ.