Index   ವಚನ - 34    Search  
 
ಕುಲಜರೆಂದು ಹುಟ್ಟಿ, ಅಂತ್ಯಜರಾದರು ನೋಡಾ ದ್ವಿಜರು; ಶಿವನೆ ದೇವನೆಂದರಿದು ಪೂಜಿಸರಾಗಿ, ಶ್ರುತಿಗಳು ಹೇಳಿದ ಶ್ರೀವಿಭೂತಿಯನೊಲ್ಲರಾಗಿ, `ಏಕೋ ರುದ್ರೋ ನ ದ್ವಿತೀಯಾಯ ತಸ್ಥೆ' ಎಂಬ ಶ್ರುತಿಯ ವಿಚಾರದಲ್ಲಿ ಇಲ್ಲವಾಗಿ, ಅರಿದರಿದೆ, ಹೊಲೆಯ ಕೊಂಡಾಡಿತ್ತು ಲೋಕ. ಇದೇನು ಸೋಜಿಗ, ಬಸವಪ್ರಿಯ ಕೂಡಲಚೆನ್ನಸಂಗಾ?