Index   ವಚನ - 36    Search  
 
ಗತಿಯ ಪಥವನರಿವಡೆ, ದಿಟವ ಸುಯಿದಾನ ಮಾಡು. ದಿಟ ಬೇರೆ ಆಚಾರ ಶಿವಾಚಾರವೆಂ[ದರು]ಮರುಳೆ. ಗುರು ದೇವನೆಂದರು ಮರುಳೆ. ದೂರತೋಂ ಗುರುಂ ದಷ್ಟ್ವಾ ಉದಾಸೀನೇನ ಯೋ ವ್ರಜೇತ್ | ಶ್ವಾನಯೋನಿಂ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಶಿವೇ ಕೃದ್ಧೇ ಗುರುಸ್ತ್ರಾತಾ ಗುರೌ ಕೃದ್ಧೇ ನ ಕಶ್ಚನ | ತಸ್ಮಾದಿಷ್ಟಂ ಗುರೋಃ ಕುರ್ಯಾತ್ ಕಾಯೇನ ಮನಸಾ ಗಿರಾ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವ ಮುನಿದಡೆ ತಿಳುಹಬಹುದು, ಗುರು ಮುನಿದಡೆ ತಿಳುಹಬಾರದು, ಏಳೇಳು ನರಕ ತಪ್ಪದು.