ದೇವ ದೇವ ಮಹಾಪ್ರಸಾದ:
ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯಾ.
ತನುಮನಧನವ ಹಿಂದಿಕ್ಕಿಕೊಂಡಿಪ್ಪ ವಂಚಕ ನಾನಯ್ಯಾ.
ನಿಮ್ಮ ಶರಣರು ಎನ್ನಿಚ್ಛೆಗೆ ಬಪ್ಪರೆ?
`ಚಕಿತಮಭಿದತ್ತೇ ಶ್ರುತಿರಪಿ' ಎನಲು,
ಎನ್ನ ನುಡಿ ನಿಮ್ಮ ಶರಣರ ತಾಗಬಲ್ಲುದೆ?
ಹಣೆಯ ಹೊಣೆಯ ತೋರಿ ಉದರವ ಹೊರೆವಂತೆ,
ನಿಮ್ಮ ಮರೆಯಲಡಗಿರ್ಪ ಹಡಪಿಗ ನಾನಯ್ಯಾ.
ಬಸವಪ್ರಿಯ ಕೂಡಲಚೆನ್ನಸಂಗನ ಶರಣರು
ಎನ್ನ ಮಾತಿಗೆ ಬಾರರು,
ನೀವೆ ಹೋಗಿ ಬಿಜಯಂಗೈಸಿಕೊಂಡು ಬಾರಾ,
ಸಂಗನಬಸವಣ್ಣಾ.
Art
Manuscript
Music
Courtesy:
Transliteration
Dēva dēva mahāprasāda:
Nim'ma śaraṇara manege salugeya baṇṭa nānallayyā.
Tanumanadhanava hindikkikoṇḍippa van̄caka nānayyā.
Nim'ma śaraṇaru ennicchege bappare?
`Cakitamabhidattē śrutirapi' enalu,
enna nuḍi nim'ma śaraṇara tāgaballude?
Haṇeya hoṇeya tōri udarava horevante,
nim'ma mareyalaḍagirpa haḍapiga nānayyā.
Basavapriya kūḍalacennasaṅgana śaraṇaru
enna mātige bāraru,
nīve hōgi bijayaṅgaisikoṇḍu bārā,
saṅganabasavaṇṇā.