Index   ವಚನ - 45    Search  
 
ದೇವಾ ನಿಮ್ಮ ಪರಿಹಾಸ ಪರಿ ಪರಸಮಯಿಗಳ ಮನೆಯಲಿಪ್ಪರೆ. ದೇವಾ ದೇವಾ ನಿಮ್ಮ ಪರಿಹಾಸ ಪರಿಹರಿಸರಿಯೆಂಬ ಮಾತ ಹುಟ್ಟಿಸುವರೆ ಜಗದಿ. ದೇವಾ ನೀವು ಮಾಡಿದ ಮಾಯೆ ಅಲ್ಲದಿರ್ದಡೆ ನೊರಜುಗಳ ಸರಿಯೆಂಬರೆ ಹೇಳಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ?