ದ್ವಿಜರೊಮ್ಮೆ ಮರೆದು ನೀಳಬೊಟ್ಟನಿಟ್ಟರಾದಡೆ,
ಅದರ ಪರಿಯಲೆ ಅಸಿಯ ಗರಗಸವ ಮಾಡಿ,
ಯಮಕಿಂಕರರು ಸೀಳುವರೆಂದುದು ನೋಡಾ. ಸ್ಕಾಂದೇ:
ಊರ್ಧ್ವಪುಂಡ್ರಂ ದ್ವಿಜಂ ಕುರ್ಯಾತ್ ಲೀಲಯಾಪಿ ಕದಾಚನ |
ತಥಾ ಕಾಲೇಣ ಶಸ್ತ್ರೇಣ ಬಾಧ್ಯತೇ ಯಮಕಿಂಕರೈಃ ||
ಊರ್ಧ್ವಪುಂಡ್ರಂ ಚ ಶೂಲಂ ಚ ವರ್ತುಲಂ ಚಾರ್ಧಂಚಂದ್ರಕಮ್ |
ಲಲಾಟೇ ಧಾರಯಿಷ್ಯಂತಿ ಮನುಷ್ಯಾಃ ಪಾಪಕರ್ಮಿಣಃ ||
ಇದನರಿದಿನ್ನು ದ್ವಿಜರು ನಂಬಿ, ಬೇಗ ವಿಭೂತಿಯನಿಟ್ಟು ಬದುಕಿ,
ಬಸವಪ್ರಿಯ ಕೂಡಲಚೆನ್ನಸಂಗನನೊಲಿಸುವಡೆ.
Art
Manuscript
Music
Courtesy:
Transliteration
Dvijarom'me maredu nīḷaboṭṭaniṭṭarādaḍe,
adara pariyale asiya garagasava māḍi,
yamakiṅkararu sīḷuvarendudu nōḍā. Skāndē:
Ūrdhvapuṇḍraṁ dvijaṁ kuryāt līlayāpi kadācana |
tathā kālēṇa śastrēṇa bādhyatē yamakiṅkaraiḥ ||
ūrdhvapuṇḍraṁ ca śūlaṁ ca vartulaṁ cārdhan̄candrakam |
lalāṭē dhārayiṣyanti manuṣyāḥ pāpakarmiṇaḥ ||
idanaridinnu dvijaru nambi, bēga vibhūtiyaniṭṭu baduki,
basavapriya kūḍalacennasaṅgananolisuvaḍe.