ನಿನ್ನಳವಲ್ಲ, ಎನ್ನಳವಲ್ಲ, ಇದಾರಳವಲ್ಲದ
ಘನವು ನೋಡಯ್ಯಾ;
ಕಾಬಡೆ ಕಂಗಳಿಗೆ ಅಸಾಧ್ಯ,
ಮುಟ್ಟುವಡೆ ಸೋಂಕಿಂಗಸಾಧ್ಯ,
ಮಾತನಾಡಿಸಿ ನೋಡಿದಡೆ ವಾಙ್ಮನಾತೀತ,
ನಿಂದಡೆ ನೆಳಲಿಲ್ಲ, ಸುಳಿದಡೆ ಹೆಜ್ಜೆಯಿಲ್ಲ,
ಪ್ರಭುದೇವರೆಂಬ ಭಾವ ತೋರುತ್ತದೆ.
ಬಸವಪ್ರಿಯ ಕೂಡಲಚೆನ್ನಸಂಗನ ಶರಣರ
ಚರಣವ ಪಿಡಿಯಲೇಳಾ ಸಂಗನಬಸವಣ್ಣಾ.
Art
Manuscript
Music
Courtesy:
Transliteration
Ninnaḷavalla, ennaḷavalla, idāraḷavallada
ghanavu nōḍayyā;
kābaḍe kaṅgaḷige asādhya,
muṭṭuvaḍe sōṅkiṅgasādhya,
mātanāḍisi nōḍidaḍe vāṅmanātīta,
nindaḍe neḷalilla, suḷidaḍe hejjeyilla,
prabhudēvaremba bhāva tōruttade.
Basavapriya kūḍalacennasaṅgana śaraṇara
caraṇava piḍiyalēḷā saṅganabasavaṇṇā.